Trace Id is missing
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ
Microsoft ಸೇವೆಗಳ ಒಪ್ಪಂದ

ನಿಮ್ಮ ಸೇವೆಗಳ ಒಪ್ಪಂದವನ್ನು ಮತ್ತಷ್ಟು ಸ್ಪಷ್ಟಪಡಿಸಲಾಗಿದೆ

Microsoft ಗ್ರಾಹಕ ಆನ್‌ಲೈನ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಬಳಸುವುದಕ್ಕೆ ಅನ್ವಯವಾಗುವ Microsoft ಸೇವೆಗಳ ಒಪ್ಪಂದವನ್ನು ನಾವು ಪರಿಷ್ಕರಿಸುತ್ತಿದ್ದೇವೆ. ನಮ್ಮ ನಿಯಮಗಳನ್ನು ಸ್ಪಷ್ಟಪಡಿಸಲು ಮತ್ತು ಅವುಗಳು ನಿಮಗೆ ಪಾರದರ್ಶಕವಾಗಿರುವುದನ್ನು ಖಚಿತಪಡಿಸಲು, ಅಂತೆಯೇ ಹೊಸ Microsoft ಉತ್ಪನ್ನಗಳು, ಸೇವೆಗಳು ಹಾಗೂ ವೈಶಿಷ್ಟ್ಯಗಳನ್ನು ಒಳಪಡಿಸಲು ನಾವು ಈ ಪರಿಷ್ಕರಣೆಗಳನ್ನು ಮಾಡುತ್ತಿದ್ದೇವೆ.

ಕೆಳಗೆ ಸಂಕ್ಷಿಪ್ತವಾಗಿ ವಿವರಿಸಿರುವ ಈ ಪರಿಷ್ಕರಣೆಗಳು 30 ಸೆಪ್ಟೆಂಬರ್, 2023 ರಂದು ಜಾರಿಗೆ ಬರಲಿವೆ. ನೀವು 30 ಸೆಪ್ಟೆಂಬರ್, 2023 ರಂದು ಅಥವಾ ನಂತರ ನಮ್ಮ ಉತ್ಪನ್ನಗಳು ಅಥವಾ ಸೇವೆಗಳ ಬಳಕೆಯನ್ನು ಮುಂದುವರಿಸಿದರೆ, ಪರಿಷ್ಕೃತ Microsoft ಸೇವೆಗಳ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸುತ್ತೀರಿ ಎಂದರ್ಥ.

ಪದೇ ಕೇಳಲಾಗುವ ಪ್ರಶ್ನೆಗಳು

Microsoft ಸೇವೆಗಳ ಒಪ್ಪಂದ ಎಂದರೇನು?

Microsoft ಸೇವೆಗಳ ಒಪ್ಪಂದವು ನಿಮ್ಮ ಮತ್ತು Microsoft (ಅಥವಾ ಅದರ ಯಾವುದೇ ಅಂಗಸಂಸ್ಥೆ) ನಡುವಿನ ಒಪ್ಪಂದವಾಗಿರುತ್ತದೆ ಮತ್ತು ಇದು Microsoft ಬಳಕೆದಾರರ ಆನ್‍ಲೈನ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀವು ಬಳಸುವುದನ್ನು ನಿರ್ವಹಣೆ ಮಾಡುತ್ತದೆ. ಈ ಒಪ್ಪಂದದ ಅಡಿಯಲ್ಲಿ ಬರುವ ಉತ್ಪನ್ನಗಳು ಮತ್ತು ಸೇವೆಗಳ ಪೂರ್ಣ ಪಟ್ಟಿಯನ್ನು ನೀವು ಇಲ್ಲಿ ನೋಡಬಹುದು.

Microsoft ಸೇವೆಗಳ ಒಪ್ಪಂದದ ಅಡಿಯಲ್ಲಿ ಯಾವ ಉತ್ಪನ್ನಗಳು ಮತ್ತು ಸೇವೆಗಳು ಬರುವುದಿಲ್ಲ?

ಉದ್ಯಮ, ಶಿಕ್ಷಣ ಅಥವಾ ಸರ್ಕಾರಿ ಗ್ರಾಹಕರಿಗಾಗಿ Microsoft 365, Azure, Yammer ಅಥವಾ ವ್ಯಾಪಾರಕ್ಕಾಗಿ Skype ಸೇರಿದಂತೆ, ವಾಲ್ಯೂಮ್ ಪರವಾನಗಿ ಗ್ರಾಹಕರಿಗಾಗಿ ಮೀಸಲಿಟ್ಟಿರುವ ಉತ್ಪನ್ನಗಳು ಮತ್ತು ಸೇವೆಗಳಿಗೆ Microsoft ಸೇವೆಗಳ ಒಪ್ಪಂದವು ಅನ್ವಯಿಸುವುದಿಲ್ಲ. ಭದ್ರತೆ, ಗೌಪ್ಯತೆ ಮತ್ತು ಅನುಸರಣೆಯ ಬದ್ಧತೆಗಳು ಅಂತೆಯೇ ವ್ಯಾಪಾರಕ್ಕಾಗಿನ Microsoft 365 ಗೆ ಅನ್ವಯಿಸುವ ಸಂಬಂಧಿತ ಮಾಹಿತಿಗಾಗಿ, ದಯವಿಟ್ಟು https://www.microsoft.com/trust-center/product-overview ಎಂಬಲ್ಲಿರುವ Microsoft 365 ವಿಶ್ವಾಸ ಕೇಂದ್ರವನ್ನು ಸಂಪರ್ಕಿಸಿ.

Microsoft ಸೇವೆಗಳ ಒಪ್ಪಂದಕ್ಕೆ Microsoft ಯಾವೆಲ್ಲಾ ಬದಲಾವಣೆಗಳನ್ನು ಮಾಡುತ್ತಿದೆ?

ಕೆಲವು ಅತ್ಯಂತ ಗಮನಾರ್ಹ ಬದಲಾವಣೆಗಳ ಸಾರಾಂಶವನ್ನು ನಾವು ಇಲ್ಲಿ ಒದಗಿಸಿದ್ದೇವೆ.

ಎಲ್ಲಾ ಬದಲಾವಣೆಗಳನ್ನು ನೋಡಲು, ನೀವು ಸಂಪೂರ್ಣ Microsoft ಸೇವೆಗಳ ಒಪ್ಪಂದವನ್ನು ಓದಬೇಕೆಂದು ನಾವು ಶಿಫಾರಸು ಮಾಡುತ್ತೇವೆ.

ಈ ನಿಯಮಗಳು ಯಾವಾಗ ಜಾರಿಗೆ ಬರುತ್ತವೆ?

ಪರಿಷ್ಕೃತ Microsoft ಸೇವೆಗಳ ಒಪ್ಪಂದವು 30 ಸೆಪ್ಟೆಂಬರ್, 2023 ರಂದು ಜಾರಿಗೆ ಬರುತ್ತದೆ. ಅಲ್ಲಿಯವರೆಗೆ, ನಿಮ್ಮ ಪ್ರಸಕ್ತ ನಿಬಂಧನೆಗಳು ಜಾರಿಯಲ್ಲಿರುತ್ತವೆ.

ನಾನು ಈ ನಿಯಮಗಳಿಗೆ ಸಮ್ಮತಿಸುವುದು ಹೇಗೆ?

ನೀವು 30 ಸೆಪ್ಟೆಂಬರ್, 2023 ರಂದು ಅಥವಾ ಅದರ ನಂತರ ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಳಕೆಯನ್ನು ಮುಂದುವರಿಸುವ ಮೂಲಕ, ಪರಿಷ್ಕೃತ Microsoft ಸೇವೆಗಳ ಒಪ್ಪಂದಕ್ಕೆ ಸಮ್ಮತಿಸುವಿರಿ. ನೀವು ಒಪ್ಪದಿದ್ದಲ್ಲಿ, 30 ಸೆಪ್ಟೆಂಬರ್, 2023 ರ ಮೊದಲು ಉತ್ಪನ್ನಗಳು ಮತ್ತು ಸೇವೆಗಳ ಬಳಕೆಯನ್ನು ನಿಲ್ಲಿಸಲು ನಿರ್ಧರಿಸಬಹುದು ಮತ್ತು ನಿಮ್ಮ Microsoft ಖಾತೆಯನ್ನು ಮುಚ್ಚಬಹುದು.